ಮಂಗ ಮತ್ತು ಕಾಗೆ
ಒಂದಾನೊಂದು ಕಾಲದಲ್ಲಿ (ಒಂದಾನೊಂದು ಕಾಲದಲ್ಲಿ)
ಬಹಳ ಹಳೆಯ ಕಥೆಯಿದು (ಬಹಳ ಹಳೆಯ ಕಥೆಯಿದು)
ಬಿಳಿ ಮೂತಿಯ ಮಂಗವೊಂದು, ಬುದ್ಧಿವಂತ ಮುದಿ ಕಾಗೆಯೊಂದು ಒಂದೇ ಕಾಡಿನಲ್ಲಿ ವಾಸವಿದ್ದವು
ಒಂದು ದಿನ ಮಂಗವು (ಒಂದು ದಿನ ಮಂಗವು)
ಕಂಡಿತೊಂದು ಹೊಳಪನು (ಕಂಡಿತೊಂದು ಹೊಳಪನು)
ಗಾಜಿನ ಗಡಿಗೆ ತುಂಬ ಹೊಳೆವ ಕಡಲೆ, ಕನಸು ಕಂಡಂತೆ ಕಂಡಿತು.
ಕಾಣಲಿಲ್ಲ ಮಂಗಕಾಗ (ಕಾಣಲಿಲ್ಲ ಮಂಗಕಾಗ)
ಬಲೆಯ ಬೀಸಿ ಅವಿತು ಕುಳಿತ (ಅವಿತು ಕುಳಿತ)
ಚುರುಕು ಬೇಟೆಗಾರನು (ಚುರುಕು ಬೇಟೆಗಾರನು)
"ಜಾಗ್ರತೆ, ಜಾಗ್ರತೆ, ಜಾಗ್ರತೆ ..."
ಮರದ ಮೇಲೆ ಕುಳಿತ ಕಾಗೆ ಆಪತ್ತನ್ನು ಸಾರಿತು
ಮುಟ್ಟಬೇಡ ಕಡಲೆ ಗಡಿಗೆ ಜಾಗರೂಕನಾಗಿರು!
"ಜಾಗ್ರತೆ, ಜಾಗ್ರತೆ, ಜಾಗ್ರತೆ ..."
ಮರದ ಮೇಲೆ ಕುಳಿತ ಕಾಗೆ ಮತ್ತೊಮ್ಮೆ ಕೂಗಿತು
ಆಸೆ ತುಂಬಿ ತುಳುಕಿ ಮಂಗ ದುರುಗುಟ್ಟಿ ಹೇಳಿತು "ಬಾಯಿ ಮುಚ್ಚು ಮುದಿ ಕಾಗೆ, ನಿನ್ನ ಕೆಲಸ ನೋಡಿಕೋ"
ಆಸೆ-ಭರಿತ ಕಂಗಳಿಂದ ಗಡಿಗೆಯೊಳಗೆ ಇಣುಕಿ ಮಂಗ
ಜೊಲ್ಲು ಸುರಿಸಿ, ಕೈ-ತೂರಿಸಿ ಕಡಲೆ ಬಾಚಿಕೊಂಡಿತು
ಗಟ್ಟಿಯಾಗಿ ಕೇಕೆಹಾಕಿ ಕಾಡಿಗೆಲ್ಲ ಸಾರಿತು
"ಎಂಥ ಅದೃಷ್ಟ ನನ್ನದು, ಎಂಥ ಅದೃಷ್ಟ ನನ್ನದು!"
ಮರುಕ್ಷಣವೇ ಅರಚಿಕೊಂಡಿತು ಚಿಕ್ಕ ಬಾಯ ಗಡಿಗೆಯಿಂದ ಕೈ-ತೆಗೆಯಲಾಗದೆ
"ಯಾಕೆ ಈಥರವಾಯಿತು, ಯಾಕೆ ಈಥರವಾಯಿತು?"
ಗಡಿಗೆ ಒಳಗಡೆ ಅಷ್ಟು ಕಡಲೆ, ಬಾಯಿ ಮಾತ್ರ ಚಿಕ್ಕದು

Labels: initiatives of change, IofC

0 Comments:
Post a Comment
<< Home